ಸೈಪ್ರಸ್
	ಮೆಡಿಟರೇನಿಯನ್ ಸಮುದ್ರದ ಪೂರ್ವಭಾಗದ ಈಶಾನ್ಯ ಮೂಲೆಯಲ್ಲಿ, ಯುರೋಪ್, ಏಷ್ಯ ಮತ್ತು ಆಫ್ರಿಕ ಖಂಡಗಳು ಸಂಧಿಸುವ ಎಡೆಯಲ್ಲಿರುವ ಗಣರಾಜ್ಯ. ಉ.ಅ. 34033†-35041† ಹಾಗೂ ಪೂ.ರೇ. 32020†-34035† ನಡುವೆ ಇದೆ. ಇದರ ವಿಸ್ತೀರ್ಣ 9,251 ಚ.ಕಿಮೀ.

	ಮೇಲ್ಮೈಲಕ್ಷಣ: ಸೈಪ್ರಸ್ ದ್ವೀಪದಲ್ಲಿ ವಿಭಿನ್ನ ರೀತಿಯ ಎರಡು ಪರ್ವತ ರಚನೆಗಳಿವೆ. ಇವು ಮಧ್ಯದ ಮೈದಾನದ ಸಮೀಪದಲ್ಲಿವೆ. ನೈಋತ್ಯ ಭಾಗದಲ್ಲಿ ಟ್ರೊಡೋಸ್ ಪರ್ವತ ಸರಣಿಗಳಿವೆ. ಉತ್ತರದಲ್ಲಿ  ಕೈರೆಬಿಯನ್ ಪರ್ವತ ಸರಣಿಕಂಡುಬರುತ್ತದೆ. ಈ ಸರಣಿ ಅತ್ಯಂತ ಎತ್ತರವಾದದ್ದು ಮೌಂಟ್ ಓಲಿಂಪಾಸ್. ಇದರ ಎತ್ತರ 1,951 ಮೀ. ಇಲ್ಲಿ ನದಿ ಮತ್ತು ಸರೋವರಗಳಿವೆ. ಮಳೆಗಾಲದಲ್ಲಿ ಮಳೆ ನೀರಿನಿಂದ ಬೇಸಗೆಯ ಪ್ರಾರಂಭದಲ್ಲಿ ಹಿಮಕರಗಿದ ನೀರಿನಿಂದ ಕೂಡಿರುತ್ತದೆ. ಇಲ್ಲಿನ ಪ್ರಮುಖ ನದಿ ಪೆಡಿಯಾನ್. ಇಲ್ಲಿ ಮೂರು ಪ್ರಮುಖ ಬಂದರುಗಳಿವೆ. ಫಾಮಗುಸ್ತಾ ಪೂರ್ವದಲ್ಲಿದ್ದರೆ ಲಾರನಕ ಮತ್ತು ಲೋಸೊಸ್ ದಕ್ಷಿಣದಲ್ಲಿವೆ.

	ವಾಯುಗುಣ: ಜುಲೈ ಮತ್ತು ಆಗಸ್ಟ್ ತಿಂಗಳಿನ ಗರಿಷ್ಠ ತಾಪಮಾನ 44.50ಸೆ ಗಿಂತ ಹೆಚ್ಚಾಗಿರುತ್ತದೆ. ಚಳಿಗಾಲದಲ್ಲಿ ಪರ್ವತ ಪ್ರದೇಶಗಳ ಕನಿಷ್ಠ ತಾಪಮಾನ -5.50ಸೆ. ಈ ಅವಧಿಯಲ್ಲಿ ಹಿಮಸುರಿಯುವುದು. ಚಳಿಗಾಲದಲ್ಲಿ ಮಳೆಯಾಗುತ್ತದೆ. ಮಳೆಯ ಸರಾಸರಿ 10††-27†† ಮೇ ತಿಂಗಳಿನಲ್ಲಿ ಟ್ರೊಡೋಸ್ ಪರ್ವತದಲ್ಲಿ 48††ಮಳೆ ಬೀಳುತ್ತದೆ. ನಿಕೋಸಿಯದಲ್ಲಿ ಜನವರಿ ತಿಂಗಳಿನ ಉಷ್ಣಾಂಶ 500 ಈ ಗಳಷ್ಟಿದ್ದರೆ, ಜುಲೈ ತಿಂಗಳಿನಲ್ಲಿ 830 ಈ ಗಳಷ್ಟಿರುವುದು. ಇಲ್ಲಿನ ವಾರ್ಷಿಕ ಮಳೆಯ ಪ್ರಮಾಣ 19.6††. ವ್ಯವಸಾಯ ಪ್ರದೇಶಗಳಲ್ಲಿ 12†† ಮಳೆ ಆಗುತ್ತದೆ.

	ಸಸ್ಯ ಮತ್ತು ಪ್ರಾಣಿವರ್ಗ: ಇಲ್ಲಿ ಸದಾ ಹಸಿರಾಗಿರುವ ಸಸ್ಯವರ್ಗದ ಅರಣ್ಯಗಳಿವೆ. ಸೇ. 18.74ರಷ್ಟು ಅರಣ್ಯಪ್ರದೇಶ. ಫಿನಿಷಿಯನ್ನರ ಕಾಲದಲ್ಲಿ ಹಡಗುಗಳ ನಿರ್ಮಾಣಕ್ಕಾಗಿ ಮರಗಳನ್ನು ಬೆಳೆಸಲಾಗಿತ್ತು. ಬ್ರಿಟಿಷರ ಕಾಲದಲ್ಲಿ ಇದು ನಾಶವಾಯಿತು. ಇಲ್ಲಿ ಕಂಡು ಬರುವ ಪ್ರಮುಖ ಮರ ಕೋನಿಫರಸ್. ಇಲ್ಲಿನ ಪ್ರಮುಖ ಸಾಕು ಪ್ರಾಣಿಗಳೆಂದರೆ ಕುರಿ, ಮೇಕೆ, ಹಂದಿ, ಹಸು.

	ಸಂಪನ್ಮೂಲಗಳು: ಸೈಪ್ರಸ್‍ನಲ್ಲಿ ದೊರೆಯುವ ಪ್ರಮುಖ ಖನಿಜಗಳು ತಾಮ್ರ, ಫೈರೈಟ್ಸ್ ಮತ್ತು ಜಿಪ್ಸಮ್.
ಈ ದ್ವೀಪದ ಪ್ರಮುಖ ಶಕ್ತಿ ಸಂಪನ್ಮೂಲಗಳೆಂದರೆ ಕಲ್ಲಿದ್ದಲು, ನೈಸರ್ಗಿಕ ಅನಿಲ, ಜಲಶಕ್ತಿ ಹಾಗೂ ಪರಮಾಣು ಶಕ್ತಿ.

	ಆರ್ಥಿಕತೆ: ಸೈಪ್ರಸ್‍ನಲ್ಲಿ ಸೇ. 28 ರಷ್ಟು ಕೃಷಿಭೂಮಿ ಸರ್ಕಾರದ ಹಿಡಿತದಲ್ಲಿದೆ. ಇದರಲ್ಲಿ 95,100 ಹೆಕ್ಟೇರ್ ವ್ಯವಸಾಯ ಪ್ರದೇಶವಾಗಿದೆ. 382 ಚ.ಕಿಮೀ. ನೀರಾವರಿ ಪ್ರದೇಶ. ಸೇ. 8.8 ಜನ ವ್ಯವಸಾಯದಲ್ಲಿ ತೊಡಗಿದ್ದಾರೆ. ದ್ರಾಕ್ಷಿ, ಆಲೂಗೆಡ್ಡೆ, ಹಾಲು, ಗೋದಿ, ಬಾರ್ಲಿ, ಹಣ್ಣುಗಳು, ಮಾಂಸ, ಕ್ಯಾರೆಟ್, ಆಲಿವ್, ತರಕಾರಿ, ಕೋಳಿ ಮೊಟ್ಟೆ ಪ್ರಮುಖ ಉತ್ಪನ್ನಗಳು.

	ಮತ್ಸ್ಯೋದ್ಯಮ: ಇಲ್ಲಿ ಆಳಸಾಗರ ಮೀನುಗಾರಿಕೆಯಿಲ್ಲ. ಒಳನಾಡಿನ ನದಿ ಸರೋವರಗಳ ಪ್ರಮಾಣ ಕಡಿಮೆ ಇರುವುದರಿಂದ ಸಣ್ಣ ಪ್ರಮಾಣದಲ್ಲಿ ಸಿಹಿ ನೀರಿನ ಮೀನುಗಾರಿಕೆಯಿದೆ. ಸಾಗರ ಅಥವಾ ಸಮುದ್ರ ಮೀನುಗಾರಿಕೆಯು ತೀರ ಪ್ರದೇಶಗಳಿಗೆ ಸೀಮಿತ.  3,744ಟನ್‍ಗಳಷ್ಟು ಮೀನು ಹಿಡಿಯಲಾಯಿತು (1999). 

	ಕೈಗಾರಿಕೆಗಳು: ಆಹಾರತಯಾರಿಕೆ, ಪಾನೀಯ, ಹೊಗೆಸೊಪ್ಪು, ಜವಳಿ,  ಚರ್ಮದವಸ್ತು, ರಾಸಾಯನಿಕ, ಪೆಟ್ರೋರಾಸಾಯನಿಕ, ರಬ್ಬರ್, ಪ್ಲಾಸ್ಟಿಕ್‍ಉತ್ಪನ್ನ, ಲೋಹಉತ್ಪನ್ನ, ಯಂತ್ರೋಪಕರಣ, ಮರ ಮತ್ತು ಮರದಉತ್ಪನ್ನಗಳಿಗೆ ಸಂಬಂಧಿಸಿದ ಕೈಗಾರಿಕೆಗಳು ಇಲ್ಲಿ ಹೆಚ್ಚಾಗಿ ಕಂಡುಬರುತ್ತವೆ. 

	ತುರ್ಕಿ ಸೈಪ್ರಿಯಾಟ್ ಪ್ರದೇಶದಲ್ಲಿ ಉತ್ತರ ಸೈಪ್ರಸ್‍ನ ಟರ್ಕಿಸ್ ಗಣರಾಜ್ಯವಿದೆ. ಇಲ್ಲಿಯ ಗ್ರೀಕ್ ಸಿಪ್ರಿಯಾಟ್ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮನ್ನಣೆಪಡೆದ ಸರ್ಕಾರ ವ್ಯವಸ್ಥೆಯಿದ್ದರೆ, ತುರ್ಕಿ ಸಿಪ್ರಿಯಾಟ್ ಪ್ರದೇಶದಲ್ಲಿ ತುರ್ಕಿ ಮಾತ್ರ ಮಾನ್ಯಮಾಡಿರುವ ಆಡಳಿತ ವ್ಯವಸ್ಥೆಯಿದೆ. 1960 ಆಗಸ್ಟ್ 16ರಲ್ಲಿ ಈ ಎರಡು ವಿಭಾಗಗಳಿಗೆ ಸೇರಿದ ಸಂವಿಧಾನ ಜಾರಿಗೆ ಬಂದಿತು. ಆದರೆ ತುರ್ಕಿ ಸಿಪ್ರಿಯಾಟ್ ಪ್ರದೇಶ ಪ್ರತ್ಯೇಕ ಸಂವಿಧಾನವನ್ನು 1985 ಮೇ 5ರಂದು ಜಾರಿಗೊಳಿಸಿತು. ಅಧ್ಯಕ್ಷ ಸ್ಥಾನ ಗ್ರೀಕ್ ಸಿಪ್ರಿಯಾಟ್ ಪ್ರದೇಶಕ್ಕೆ ಸೇರಿದರೆ, ಉಪಾಧ್ಯಕ್ಷ ಸ್ಥಾನ ತುರ್ಕಿ ಸಿಪ್ರಿಯಾಟ್ ಪ್ರದೇಶಕ್ಕೆ ಮೀಸಲಾಗಿದೆ.

	ಇತಿಹಾಸ: ಸೈಪ್ರಸ್ ದ್ವೀಪವು ಪ್ರಾಂಕಿಸ್ ಸಾಮ್ರಾಜ್ಯದಿಂದ 1193ರಲ್ಲಿ ಪ್ರತ್ಯೇಕಗೊಂಡಿತು. ಇದು 1489ರಲ್ಲಿ ವಿನಿಟಯನ್ ಆಡಳಿತಕ್ಕೆ ಒಳಪಟ್ಟಿತ್ತು. 1751ರಲ್ಲಿ ಟರ್ಕರ ಆಕ್ರಮಣಕ್ಕೆ ಒಳಗಾಯಿತು. 1914ರಲ್ಲಿ ಈ ದ್ವೀಪ ಗ್ರೇಟ್-ಬ್ರಿಟನ್ನಿನ ಸ್ವಾಧೀನಕ್ಕೆ ಒಳಪಟ್ಟಿತು. 1925 ಮೇ 1 ರಂದು ಈ ದ್ವೀಪಕ್ಕೆ ವಸಾಹತು ರಾಜಾಧಿಕಾರವನ್ನು ಕೊಡಲಾಯಿತು. 1930ರಲ್ಲಿ ಗ್ರೀಕ್ ಸಂಘಟನೆ ಗ್ರೀಕ್ ಸಿಪ್ರಿಯಾಟ್ ಚಳವಳಿಯನ್ನು ಪ್ರಾರಂಭಿಸಿತು. ಇದಕ್ಕಾಗಿ ಬ್ರಿಟಿಷರ ವಿರುದ್ಧ 1955ರಲ್ಲಿ ಗೆರಿಲ್ಲಾ ಚಳವಳಿ ಪ್ರಾರಂಭವಾಯಿತು. ಇದರ ಮುಂದಾಳತ್ವವನ್ನು ಗ್ರೀಕ್ ಆರ್ತೊಡಕ್ಸ್ ಚರ್ಚ್‍ನ ಆರ್ಚ್‍ಬಿಷಪ್ ಮಕರೊಯಿಸ್ ವಹಿಸಿಕೊಂಡ. ಇವನ ಮುಖಂಡತ್ವದಲ್ಲಿ 1955ರಲ್ಲಿ ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ಧ ಪ್ರಾರಂಭವಾಯಿತು. ಇದರ ಫಲವಾಗಿ 1959ರಲ್ಲಿ ಗ್ರೀಕ್ ಮತ್ತು ಟರ್ಕಿಸ್ ಸಿಪ್ರಿಯಾಟರು ಸ್ವತಂತ್ರ ಸಂವಿಧಾನಬದ್ಧ ಸೈಪ್ರಸ್ ನಿರ್ಮಾಣಕ್ಕಾಗಿ ಒಪ್ಪಂದ ಮಾಡಿಕೊಂಡರು. ಮಕರೊಯಿಸ್ ಇದರ ಅಧ್ಯಕ್ಷನಾದ. 1960 ಜೂನ್ 16ರಂದು ಸೈಪ್ರಸ್ ಸ್ವತಂತ್ರ ದ್ವೀಪವಾಯಿತು. 1963 ಡಿಸೆಂಬರ್‍ನಲ್ಲಿ ಟರ್ಕಿಸ್ ಸಿಪ್ರಿಯಾಟರು ಒಪ್ಪಂದವನ್ನು ವಾಪಸ್ ಪಡೆದುಕೊಂಡರು. ಇದರ ಪರಿಣಾಮ ಗ್ರೀಕ್ ಸಿಪ್ರಿಯಾಟರು ಮತ್ತು ಟರ್ಕಿಸರ ನಡುವೆ ಹೋರಾಟ ಪ್ರಾರಂಭವಾಯಿತು. ಇದನ್ನು ಸಂಯುಕ್ತ ರಾಷ್ಟ್ರ ಸಂಘದ ಶಾಂತಿ ಒಪ್ಪಂದಕ್ಕೆ ಕಳುಹಿಸಲಾಯಿತು. 1974 ಜುಲೈ 20ರಂದು ಟರ್ಕಿ ಈ ದ್ವೀಪನ್ನು ಆಕ್ರಮಿಸಿತು. ಸೈಪ್ರಸ್‍ನ ಉತ್ತರಭಾಗ ಟರ್ಕಿಸ್‍ರ ಪ್ರದೇಶವಾಯಿತು. ಗ್ರೀಕ್ ಸಿಪ್ರಿಯಾಟರು ದಕ್ಷಿಣ ಭಾಗವನ್ನು ಆಶ್ರಯಿಸಿದರು. 1975 ಟರ್ಕಿಸ್ ಸಿಪ್ರಿಯಾಟರು ಸೈಪ್ರಸ್‍ನ್ನು ಒಕ್ಕೂಟ ರಾಜ್ಯವೆಂದು ಘೋಷಿಸಿ, ರಾಫ್ ಡೆಂಕ್‍ಟಾಸ್‍ನನ್ನು ಅಧ್ಯಕ್ಷನನ್ನಾಗಿ ಆಯ್ಕೆಮಾಡಿದರು. 1983ರಲ್ಲಿ ಟರ್ಕಿಸ್ ಸಿಪ್ರಿಯಾಟರು ಉತ್ತರ ಭಾಗವನ್ನು ಟರ್ಕಿಸ್ ಗಣರಾಜ್ಯ ಎಂದು ಹೇಳಿಕೆ ನೀಡಿದರು. 1991ರಲ್ಲಿ ರಾಷ್ಟ್ರ ಸಂಘ ಈ ಹೇಳಿಕೆಯನ್ನು ತಿರಸ್ಕರಿಸಿತು. 1998ರಲ್ಲಿ ಗ್ರೀಕ್ ಮತ್ತು ಟರ್ಕಿಸ್ ಪಂಗಡಗಳ ವಿಭಾಗವನ್ನು ಒಟ್ಟುಗೂಡಿಸಿ ಸಂಯುಕ್ತ ಒಕ್ಕೂಟವನ್ನು ಗುರುತಿಸಲಾಯಿತು. 2004 ಏಪ್ರಿಲ್ 21ರಂದು ಸೈಪ್ರಸ್ ಗ್ರೀಕನ ಒಂದು ಭಾಗ ಎಂದೂ ಯುರೋಪ್ ಒಕ್ಕೂಟದ ಒಂದು ಭಾಗವೆಂದೂ ಗುರುತಿಸಲಾಯಿತು.			
						*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ